Saturday, August 6, 2011

ಬಾ ಗೆಳೆಯ...

ಬಾ ಗೆಳೆಯ ಬೇಗ ಸನಿಹ
ತಾಳಲಾರೆನು ಇನ್ನು ಈ ವಿರಹ
ಕೊಟ್ಟಾದರೂ ಕೊಡು ಎಲ್ಲಿರುವಿಯೆಂಬ ಕುರುಹ
ಬಂದಮೇಲೆ ಮತ್ತೆಲ್ಲಿಗೂ ಹೋಗದಿರು ಪುನಃ

ಹೆಚ್ಚುತಿಹುದು ಮನದ ಕಳವಳ ಕ್ಷಣಕ್ಷಣ
ಬಿಡದೆ ಕಾಡುತಿಹುದು ನಿನ್ನ ನೆನಪ ರಿಂಗಣ
ಅರಿಯೆ ಇದಕೆಲ್ಲ ಏನೆಂದು ಕಾರಣ
ಬೇಗ ತೋರು ಗೆಳೆಯ ನೀನಿರುವ ಆ ತಾಣ

ಇನಿಯ ಎಂದ ತಕ್ಷಣ
ಮೂಡುವುದು ಕತ್ತಲ ಹಿತ್ತಲಲ್ಲಿ ನಿನ್ನ ಚಿತ್ರಣ
ನೀಡುವಿ ಯಾವಾಗ ಆ ಕಲ್ಪನಾ ನಕ್ಷೆಗೆ ಪ್ರಾಣ, ತ್ರಾಣ
ತಾಳಲಾರೆ ಚಡಪಡುತಿರುವ ಚಿತ್ತದ ಈ ತಲ್ಲಣ

No comments:

Post a Comment