Sunday, August 7, 2011

ನವೋದಯ ಎಂದಾಕ್ಷಣ...


whistle ನ ಕೀರಲು ದನಿಯ ಸುಪ್ರಭಾತ ,
ಮನದಲಿ ನಿದ್ದೆ ಕಳೆದುಕೊಂಡ ಯಾತನೆಯ ಜಲಪಾತ

ಮೈ ನಡುಗಿಸುತಿದ್ದ ಚುಮು ಚುಮು ಚಳಿ 
ಅನುತಿತ್ತು ಪುಟ್ಟ ದನಿಯೊಂದು "ಇದೇ ಸರಿಯಾದ ಶುರು ಮಗು ತಿಳಿ"


HOUSE ON DUTY ಮಕ್ಕಳ thought,topic,news,newword​ ಪರದಾಟ
MOD,ಪ್ರಾಂಶುಪಾಲರಿಂದ ಶಿಸ್ತಿನ ಪರಿಪಾಟ

ನಂತರವೇ MP hall ರಂಗೇರಿಸುತ್ತಿದ್ದ ಗೀತೆ HUMI NAVODAYA..
ಮರುನೆನಪಿಸುತ್ತ ನಮ್ಮ ನವ ಉದಯ 


 

cleaning duty ತಂದಿಡುತ್ತಿತ್ತು ಹುಡುಗ ಹುಡುಗಿಯರಲಿ ಮಾತಿನ ಚಕಮಕಿ
ದೊಡ್ಡವರಾದಂತೆ ಆದೆವು ನಮ್ಮಷ್ಟಕ್ಕೆ ನಾವು ಸಹಜವಾಗಿ ಅಂತರ್ಮುಖಿ

ನಿಶ್ಯಬ್ಧದ afternoon,evening study ಗಳಂತು ಅಪರೂಪವೇ ಸರಿ
ಅಕಸ್ಮಾತ್ ಇದ್ರೆ ಹತ್ತಿರದಲ್ಲೇ ಯಾವ್ದೋ unit test ಅಥವಾ assignment ಇರೋದು ಖಾತರಿ


ಗಲಾಟೆ ಮಾಡಿದ್ರೆ ಹುಡುಗನ ಜೊತೆ ಕೂರಿಸ್ತಿದ್ದ ಶಿಕ್ಷೆಗಳು
ಕೂಡುವ ಮುನ್ನ ಸಹಸ್ರ ಬಾರಿ ಹಿಂಜರಿಯುತ್ತಿದ್ದ ಮನಸುಗಳು


 

wash ಕಲ್ಲಿನ ಸಲುವಾಗಿ ನಡೆಯುತ್ತಿದ್ದ ಶನಿವಾರದ ಓಟ
ಒಂದು ಹೆಚ್ಚಿಗೆ ಸಿಕ್ಕರೂ ಅನಂತ ಖುಷಿ ಕೊಡುತಿದ್ದ ಚಪಾತಿಯ ಮಾಟ


 

                    
ಶಿವಾಲಿಕ್ ,ಅರಾವಳಿ ,ಉದೈಗಿರಿ ,ನೀಲ್ಗಿರಿ
house ಅಂದ್ರೆ ಅಬ್ಬ ಅದೇನ್ ಅಭಿಮಾನ ರೀ !!
   

 
ಅಧ್ಯಾಪಕರೇ ಆಗ ನಮ್ಮ ಪಾಲಕ ಪೋಷಕರು
ಆತ್ಮವಿಶ್ವಾಸವ ನೀರೆರದು ಬೆಳೆಸಿದ ಪೂಜ್ಯರವರು

ಒಟ್ಟಿಗೆ ನವೋದಯ ಎಂದಾಕ್ಷಣ ಮೊಗದಲಿ ಮೂಡುವುದು ಮಂದಹಾಸ
ಚಿತ್ತದಲಿ ಈ ಎಲ್ಲ ಸವಿ ನೆನಪುಗಳ,ವಿರಹದ ಅಟ್ಟಹಾಸ!!
Reply

Forward



7 comments: