Monday, March 26, 2012

ಭ್ರಾತೃಶ್ರೀ ಭರತ್ ಗೆ birthday ಯ badaayi..


    ಹೇ ಪುಟ ಎಷ್ಟು ಬೇಗ ಇಷ್ಟು ದೊಡ್ಡವನಾಗಿಬಿಟ್ಟೆ!! ಬಹು ಬಣ್ಣ ಮಿಶ್ರಿತ ಭಾವಗಳಿಂದ ಕೂಡಿ ವಿಜ್ರಂಭಿಸುತಿತ್ತು ಈ ಜಗತ್ತಿಗೆ ನೀನು ಪಾದಾರ್ಪಣೆ ಮಾಡಿದ್ದ ಆ ದಿನ - ಹೌದು ಆ ದಿನ ಹೋಳಿ! ಆಗ ಆ ೩ ವರ್ಷ ವಯಸ್ಸಿನ ನನ್ನ ಕಣ್ಣುಗಳು ಗ್ರಹಿಸಿದ್ದು ಎರಡೇ ಬಣ್ಣ. ಒಂದು ಹೋಳಿಯ ಸಂಭ್ರಮದ್ದು ಮತ್ತೊಂದು ನನ್ನ ಜೊತೆ ಆಡುವುದಕ್ಕೆ, ತಮ್ಮ ಎಂದು ಕರೆಯುವುದಕ್ಕೆ, ಅಕ್ಕ ಎಂದು ಕರೆಸಿಕೊಳ್ಳುವುದಕ್ಕೆ ಒಬ್ಬ ಮುದ್ದಿನ ತಮ್ಮ ಸಿಕ್ಕ ಎಂಬ ಖುಷಿದು. ಹಾಗೆ ಅದನ್ನೆಲ್ಲ ಈ ೨೦ ವರ್ಷ ವಯಸ್ಸಿನ ಕಣ್ಣಿನಿಂದ ಅಪ್ಪ,ಅಮ್ಮ,ಅಜ್ಜಿ,ತಾತ ರ ಮನದಲ್ಲಿ ಇಣುಕಿದಾಗ ಕಾಣಸಿಕ್ಕಿದ್ದು ಮಗದೊಂದು ಬಣ್ಣ - ವಂಶೋದ್ಧಾರಕ ಉದಯಿಸಿದನೆಂಬ ಸಾರ್ಥಕತೆಯ ಸಿರಿ.
            ನಂತರ ನೀನು ಮಾತಾಡೋದು ಕಲಿತೆ. ಮಾತು ಬಂದಿದ್ದೇ ತಡ ದೇವರಲ್ಲಿ ನಿನ್ನ ಪ್ರಥಮ ಕೋರಿಕೆ - ದೇವ್ರೇ ಬೇಗ ಮೀಸೆ ಬರೋ ಹಾಗೆ ಮಾಡಪ್ಪ ಅಂತ. ಗುಡಿಗೆ ಹೋದ್ರೆ ನಮಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗು. ನಂತರ ನಿನ್ನ ಶಾಲೆಗೆ ಸೇರಿಸಬೇಕದ್ರಂತೂ ನಾನು ಶತಪ್ರಯತ್ನ ಮಾಡಬೇಕಾಯ್ತು. ಅದೆಷ್ಟು ಹಠ ಪುಟ ನಿಂದು. ಆದರೆ ಅಲ್ಲಿಂದ ನೀ ಹಿಡಿದ ಹಾದಿಗಳೆಲ್ಲವೂ ಯಶಸ್ಸಿನವೇ.
ಹೀಗೆಯೇ ನಿನ್ನ ಜೀವನದಲ್ಲಿ ಪ್ರತಿ ಘಳಿಗೆ, ಪ್ರತಿ ಕ್ಷಣವೂ ಯಶಸ್ಸು ದೊರೆಯುತಿರಲಿ. ಜೀವನವೆಂಬ ದೋಣಿಯ ಚುಕ್ಕಾಣಿ ಯಾವ ತರಹದ ನೇವುರಕ್ಕೂ ಸಿಗದಂತೆ ಅದನ್ನು ಅತೀ ಜಾಗರೂಕತೆಯಿಂದ ನಡೆಸುವಂತಾಗಲಿ.ಧಮನಿ-ಧಮನಿಗಳ ಮಿಡಿತಗಳಲ್ಲಿ ಕೇಳಿ ಬರಲಿ ಪರಿಶ್ರಮ,ಹೋರಾಟ,ವಿವೇಕ,ಸಭ್ಯತೆ,ಸಜ್ಜನಿಕೆಯ ಸಾಮಗಾನ. ನೀನು ಮಾಡಿದ ಉಪಕಾರ, ಆಡಿದ ಒಳ್ಳೆಯ ಮಾತೇ ನಿನ್ನ ಭವಿಷ್ಯಕ್ಕೆ ಇಂಬು.ಈ ನಿನ್ನ ೧೭ನೆಯ ಸಂವತ್ಸರದ ಹುಟ್ಟು ಹಬ್ಬ ಉಜ್ವಲ ಹಾಗೂ ಶಾಂತಿ ತುಂಬಿದ ಖುಷಿ ಜೀವನಕ್ಕೆ ನಾಂದಿಯಾಗಲೆಂದು ಆಶಿಸುತ್ತಾ
                                                                                                                                                                                          -ನಿನ್ನ ಅಕ್ಕ
    ಮತ್ತೊಮ್ಮೆ ಹುಟ್ಟು ಹಬ್ಬದ  ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
      ಶುಭವಾಗಲಿ:) 

No comments:

Post a Comment