whistle ನ ಕೀರಲು ದನಿಯ ಸುಪ್ರಭಾತ ,
ಮನದಲಿ ನಿದ್ದೆ ಕಳೆದುಕೊಂಡ ಯಾತನೆಯ ಜಲಪಾತ
ಮೈ ನಡುಗಿಸುತಿದ್ದ ಚುಮು ಚುಮು ಚಳಿ
ಅನುತಿತ್ತು ಪುಟ್ಟ ದನಿಯೊಂದು "ಇದೇ ಸರಿಯಾದ ಶುರು ಮಗು ತಿಳಿ"
HOUSE ON DUTY ಮಕ್ಕಳ thought,topic,news,newword ಪರದಾಟ
MOD,ಪ್ರಾಂಶುಪಾಲರಿಂದ ಶಿಸ್ತಿನ ಪರಿಪಾಟ
ನಂತರವೇ MP hall ರಂಗೇರಿಸುತ್ತಿದ್ದ ಗೀತೆ HUMI NAVODAYA..
ಮರುನೆನಪಿಸುತ್ತ ನಮ್ಮ ನವ ಉದಯ cleaning duty ತಂದಿಡುತ್ತಿತ್ತು ಹುಡುಗ ಹುಡುಗಿಯರಲಿ ಮಾತಿನ ಚಕಮಕಿ
ದೊಡ್ಡವರಾದಂತೆ ಆದೆವು ನಮ್ಮಷ್ಟಕ್ಕೆ ನಾವು ಸಹಜವಾಗಿ ಅಂತರ್ಮುಖಿ
ನಿಶ್ಯಬ್ಧದ afternoon,evening study ಗಳಂತು ಅಪರೂಪವೇ ಸರಿ
ಅಕಸ್ಮಾತ್ ಇದ್ರೆ ಹತ್ತಿರದಲ್ಲೇ ಯಾವ್ದೋ unit test ಅಥವಾ assignment ಇರೋದು ಖಾತರಿ
ಗಲಾಟೆ ಮಾಡಿದ್ರೆ ಹುಡುಗನ ಜೊತೆ ಕೂರಿಸ್ತಿದ್ದ ಶಿಕ್ಷೆಗಳು
ಕೂಡುವ ಮುನ್ನ ಸಹಸ್ರ ಬಾರಿ ಹಿಂಜರಿಯುತ್ತಿದ್ದ ಮನಸುಗಳು wash ಕಲ್ಲಿನ ಸಲುವಾಗಿ ನಡೆಯುತ್ತಿದ್ದ ಶನಿವಾರದ ಓಟ
ಒಂದು ಹೆಚ್ಚಿಗೆ ಸಿಕ್ಕರೂ ಅನಂತ ಖುಷಿ ಕೊಡುತಿದ್ದ ಚಪಾತಿಯ ಮಾಟ