Monday, January 23, 2012

ಪರೀಕ್ಷೆ

ಈ ಲೇಖನ ಪರೀಕ್ಷೆಗೆ ಬಿಟ್ಟ ಗಡ್ಡ, eye-brow ಗೆ, "movie ಗಾ.. ಆಗಲ್ಲ ಮಚಾ ನಾಳೆ exam","ಇಲ್ಲ ಅತ್ತೆ ಈ ಸಂಕ್ರಾಂತಿಗೆ ಬರಕಾಗಲ್ಲ", "ಹೇ exam ಮುಗ್ದಿದ್ದಿನ ಎಲ್ಲಿಗೆ ಹೋಗಣರೆ" ಹಾಗೂ ಉತ್ತರಿಸದಿರದ "ಹಾಯ್, ಸಾಕ್ ಮಾರೈತಿ ಓದಿದ್ದು.. ಅರ್ಧ ತಾಸೂ ನಂಜೊತೆ ಚಾಟ್ ಮಾಡಕಾಗಲ್ವ!" ಅನ್ನೋ ಅನಂತಾನಂತ ಸಂದೇಶಗಳಿಗೆ..
ಅಬ್ಬ ಅಂತೂ ಇಂತೂ ಪರೀಕ್ಷೆ ಮುಗೀತು.. ಗಟ್ಟಿಯಾಗಿ ಕಟ್ಟಿದ್ದ ಕೈ ಕಾಲನ್ನು ಸಡುಲಿಸಿದ ಅನುಭವ (ಪೂರ್ತಿ ಬಿಚ್ದಂಗಲ್ಲ ಯಾಕಂದ್ರೆ ಇನ್ನು ೨ ವರ್ಷ ಬಾಕಿ ಇದೆಯಲ). ಹಕ್ಕಿಯೊಂದನ್ನು ಸ್ವಚ್ಛಂದವಾದ ಹಾರಾಟಕ್ಕಾಗಿ ಬಿಟ್ಟ ಹಾಗಾಗಿದೆ. ಈ ಸಮಯದಲ್ಲಿ ಎಲ್ಲವೂ ಹೊಸತಾಗಿ ಹಾಗೂ ಸುಂದರವಾಗಿ ಕಾಣಲಿಕ್ಕೆ ಶುರುವಾಗಿ ಬಿಡುತ್ತದೆ.
ಚಿಕ್ಕಂದಿನಿಂದಲೂ ನಾವು ಪರೀಕ್ಷೆಯ ಜೊತೇನೆ ಬೆಳೆತೀವಿ ನಿಜ. ಆದ್ರೆ ಪರೀಕ್ಷೆ ಅಂದಾಕ್ಷಣ ನಮಗೆ ಅನ್ಸೋ ರೀತಿ ಬದಲಾಗ್ತಾ ಬಂದಿದೆ. ಚಿಕ್ಕವರಿದ್ದಾಗ ಪರೀಕ್ಷೆ ಅಂದ್ರೆ ಏನೂ ಅನ್ಸ್ತಾನೆ ಇರ್ಲಿಲ್ಲ. ಆಟ ,ಓಟ ,ಹಬ್ಬ ,ಸಂಭ್ರಮ ಏನನ್ನೂ ತ್ಯಾಗ ಮಾಡೋ ಅವಶ್ಯ ಇರ್ಲಿಲ್ಲ. ಏನೋ ಅಮ್ಮ ಪಾಠದ  ಹಿಂದಿನ ಪ್ರಶ್ನೆ ಅಲ್ಲದೆ ಮಧ್ಯದ್ದೂ ಕೇಳಲಿಕ್ಕೆ ಶುರು ಮಾಡಿದಾಗ ಒಂಚೂರು ಅನ್ಸ್ತಿತ್ತು  ಅಷ್ಟೇ. ಬಿಟ್ರೆ ಪರೀಕ್ಷೆ ಅನ್ನೋದು ಸದ್ದಿಲ್ಲದೇ ಬಂದು ಹೋಗ್ಬಿಡ್ತಿತ್ತು. ನವೋದಯ entranceಪರೀಕ್ಷೆ ಬರ್ದಾಗ್ಲೆ ಪರೀಕ್ಷೆ ಅನ್ನೋ ಪದದಲ್ಲಿ ಭಯ, ಕುತೂಹಲ ಕೂಡ ಅಡಗಿದೆ ಅಂತ ತಿಳ್ದಿದ್ದು. ಇನ್ನು ನಂತರದ ವಿಷಯ ಅಂತೂ ಹೇಳಂಗೆ ಇಲ್ಲ ಬಿಡಿ. ಎಲ್ಲೋ ಅಡಗಿ ಕೂತಿದ್ದ ಭಯದ ಅಂಶ ಎದ್ದು ವಿಶಾಲವಾಗಿ ಆವರಿಸಿಕೊಂ ಹಾಗಾಗಿದೆ. ಮೂರು ತಿಂಗಳ ಮುಂಚೆ ಇಂದಾನೆ ಶುರು ಆಗತ್ತೆ ಜ್ವರ. ಶುರು ಅಲ್ಲಿ ವೇಳಾಪಟ್ಟಿ ಹಾಕಿದ್ದೇ  ಹಾಕಿದ್ದು,  ಓದಿದ್ದೇ ಓದಿದ್ದು .ಬರ್ತಾ ಬರ್ತಾ ದೇವ್ರೇ ಮುಗ್ದ್ರೆ ಸಾಕು ಅನ್ನೋ ಭಾವನೆ. ಹಾಗೇ ನಾವು ಹುಡುಗಿಯರಿಗೆ ಹೆಮ್ಮೆಯ ವಿಷಯವಾದ ಅವರಿವರ ಬಗೆಗಿನ ಹರಟೆಗೆ ಕೊಡೊ ಸಮಯವೂ ಸಹ ಕಮ್ಮಿ ಆಗ್ತಾ ಬರ್ತದೆ. ಈ ನಮ್ಮ ೩ ತಿಂಗಳ ಮೌನವನ್ನು ಸಂಭ್ರಮಿಸುವ ಏಕೈಕ ವ್ಯಕ್ತಿ ಅಂದ್ರೆ ನಮ್ಮ ಸೆಕ್ಯೂರಿಟಿ ನೋಡಿ. ಯಾಕಂದ್ರೆ ಸುಮ್ನಿರ್ಸೋ ಕೆಲಸ ತಪ್ಪುತ್ತಲ್ವ ಅದಕ್ಕೆ. ಹೀಗೆ ಹೇಗೋ ಮಾಡಿ theory ಮುಗಿಸ್ತೀವಿ. ಇನ್ನು practical ನ ಸಮಯ. ಇದು ಒಂಥರಾ ಮಜಾ ಕಣ್ರೀ. ಹೆಂಗಂದ್ರೆ propose ಮಾಡದೆ ಇರೋ ಆದ್ರೆ ಇಬ್ಬರಿಗೂ ಸಮ್ಮತಿ ಇರೋ ಪ್ರೀತಿಯ  ಥರ. ನಮಗೂ ಗೊತ್ತಿರತ್ತೆ  ಅವರಿಗೂ ಗೊತ್ತಿರತ್ತೆ  pass ಆಗ್ತೀವಂತ. ಆದರೂ ಸಹ ಭರವಸೆ ತುಂಬಿದ  ಭಯದ ನಾಟಕ . ಇನ್ನು viva ಗಂತೂ ವಿಷಯದ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲ ಅಂದ್ರೂ ಪರೀಕ್ಷಕರು ಹೇಗಿದಾರೆ ಅನ್ನೋದರ ಬಗ್ಗೆ  ಅಂತೂ ಪಕ್ಕಾ ಆಗಿ ಹೋಗಿರ್ತಿವಿ.
 ಅಬ್ಬಾ ಹಾಗೋ ಹೇಗೋ ಪರೀಕ್ಷೆ ಮುಗ್ಸಿದ್ದಾಯ್ತು.. ಏನು ಹೇಗಾಯ್ತು ಅಂತ ಕೇಳಿದ್ರಾ.. ಮುಗೀತು ಅಷ್ಟೇ ಆ ಥರದ ಪ್ರಶ್ನೆಗಳೆಲ್ಲ ಇಲ್ಲಿ ನಿಷೇಧ. ಕೊಟ್ಟಿಲ್ಲದ, ತೆಗೆದುಕೊಳ್ಳದ treatಗಳು , hello ಅನ್ನದ hi ಗಳು, ತಿಂಗಳುಗಟ್ಟಲೆ ಹೋಗ್ಲಿಕ್ಕಾಗದ ಮನೆಗಳು ಹೀಗೆ ಇನ್ನೂ ತುಂಬಾ ಬಾಕಿ ಇವೆ. ಹಾಗೆ ಸಿರಿಮನೆಗೂ ಬಂದು ತುಂಬಾ ದಿನ ಆಗಿತ್ತು. ಅದ್ಕೆ ಮೊದಲು ಇಲ್ಲಿ ಬಂದು ಮನೆ ಚೂರು ಧೂಳು ಆಗಿತ್ತು ಸ್ವಚ್ಛ ಮಾಡಿ ನಿಮಗೆಲ್ಲ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿಯ ಶುಭಾಷಯ ಹೇಳಿ ಮುಂದೆ ಹೋಗುವ ಅಂತ ಬಂದೆ. 


ಮಕರ ಸಂಕ್ರಾಂತಿಯ ಹಾರ್ದಿಕ ಶುಭಕಾಮನೆಗಳು
ಸರಿ ಬರ್ತೀನಿ:)

1 comment:

  1. pareekshe chennagide...ennu resultna nireekshe baggenu barali baraha...

    ReplyDelete